ಸಂಸತ್ ನ ಲೋಕಸಭಾ ಸದನಕ್ಕೆ ಆಗಂತುಕರು ನುಗ್ಗಿದ ಘಟನೆ ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಖಂಡಿಸಿದ್ದಾರೆ. ಪ್ರಜಾಪ್ರಭುತ್ವದ ದೇಗುಲದ ಭದ್ರತೆಯ ವಿಷಯದಲ್ಲೇ ಈ ರೀತಿಯ ಬೇಜವಾಬ್ದಾರಿ ವಹಿಸಿದ್ದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ. ಇದು ಕೇಂದ್ರ ಗೃಹ ಇಲಾಖೆಯ ವಿಫಲತೆ ಯಲ್ಲದೇ ಮತ್ತೇನೂ ಅಲ್ಲ, ವೀಕ್ಷಕರ ಗ್ಯಾಲರಿ ಪ್ರವೇಶಕ್ಕೆ ಪಾಸ್ ನೀಡುವಾಗ ಕನಿಷ್ಠ ಪ್ರಮಾಣದ ವಿಚಾರಣೆಯನ್ನೂ ಮಾಡದೇ ಇರುವುದು ಎಂಪಿ ಪ್ರತಾಪ್ ಸಿಂಹ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದಿದ್ದಾರೆ.