ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನೆಲೆಸಿರುವ ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಬೆಳ್ಳಿ ಮೂರ್ತಿ ಆನೆ ಅಂಬಾರಿಯ ಮೇಲೆ ಕೂರಿಸಿಕೊಂಡು ಹಾಗೂ ಬಾಲ ಶಿವಯೋಗಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳನ್ನು ರಥೋತ್ಸವದಲ್ಲಿ ಕೂರಿಸಿಕೊಂಡು ಶ್ರೀ ಮಠದಿಂದ ಸಕಲ ವಿವಿಧ ವಾಧ್ಯ ವೈಭವಗಳೊಂದಿಗೆ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದಲ್ಲಿ ಭವ್ಯ ಮೆರವಣಿಗೆಯ ಮಾಡಿಕೊಂಡು ರಾಜವಾಡೆ ಮಾರ್ಗವಾಗಿ ಭೀಮನ ಬಾವಿಯಲ್ಲಿ ಗಂಗಸ್ಥಳ ಮುಗಿಸಿಕೊಂಡು ಅದ್ದೂರಿಯಾಗಿ ಪ್ರಮುಖ ಬೀದಿಗಳಲ್ಲಿ ಆನೆ ಅಂಬಾರಿಯ ಉತ್ಸವದೊಂದಿಗೆ ಯುವಕರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ಖಾಸತೇಶ್ವರ ಮಹಾಸ್ವಾಮಿಗಳ, ಹಾಗೂ ಶ್ರೀ ವೀರಕ್ತಶ್ರೀಗಳ, ಬಾಲ ಶಿವಯೋಗಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಕೃಪೆಗೆ ಭಾಜನರಾದರು.
ವರದಿ : ಲಾಲಸಾಬ ಸವಾರಗೋಳ I Today News ವಿಜಯಪುರ