ವಿಜಯಪುರದ ಗಾಂಧಿನಗರದಲ್ಲಿ 4 ವರ್ಷದ ಮಗು ಕಳ್ಳತ ಮಾಡಿದ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು ಆತನನ್ನು ಪೊಲೀಸ್ ರಿಗೆ ಒಪ್ಪಿಸಿದ್ದಾರೆ.
ಶಿವಣಗಿ ಗ್ರಾಮದ ಇಸ್ಟಾಲ್ ಹಸನಸಾಬ ಬಗಲಿ ಎಂಬಾತನೇ ಮಕ್ಕಳ ಕಳ್ಳತನದ ಆರೋಪಿ ಸದ್ಯ ಪೊಲೀಸ್ ಸುಪರ್ದಿಯಲ್ಲಿರುವ ಈತ ಮಾನಸಿಕವಾಗಿ ಅಸ್ವಸ್ಥನೆನ್ನಲಾಗುತ್ತಿದೆ. ರೇಣುಕಾ ಎಂಬುವವರ ನಾಲ್ಕು ವರ್ಷದ ಮಗು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ತನಿಖೆ ಬಳಿಕವೇ ಸತ್ಯಾಂಶ ಹೊರಬೀಳಲಿದೆ.
ಮಾದ್ಯಮ ದೊಂದಿಗೆ ಮಾತನಾಡಿದ ರೇಣುಕಾ ನಾನು ನನ್ನ ಮಗಳಿಗೆ ಔಷಧಿ ಕೊಡುತ್ತಿದ್ದೆ. ಮಗ ಅಂಗಡಿಗೆ ಹೋಗಿದ್ದ. ಈ ವೇಳೆ ಕಳ್ಳ ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಮಗು ತೆಗೆದುಕೊಂಡು ಮುಂದಕ್ಕೆ ಹೋಗುತ್ತಿದ್ದ. ನನ್ನ ಮಗ ಕಿರುಚುತ್ತಿದ್ದ. ಆಗ ಅವನು ಬಾಯಿ ಒತ್ತಿ ಹಿಡಿದಿದ್ದಾನೆ. ನನಗೆ ಮಗನ ಧ್ವನಿ ಕೇಳಿತು. ಏನೋ ಆಯ್ತು ಅಂತ ಹೊರಗೆ ಓಡಿ ಬಂದೆ. ಅವಾಗ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಎಂದರು ಆರೋಪಿಯನ್ನು ಮೊದಲು ನಾವು ಎಲ್ಲೂ ನೋಡಿರಲಿಲ್ಲ. ಈ ರೀತಿ ಮಗುನಾ ಎತ್ತುಕೊಂಡು ಹೋದರೆ ನಾವು ಏನ್ ಮಾಡಬೇಕು. ನಾವು ಕೆಲಸಕ್ಕೆ ಅಂತ ಹೊರಗೆ ಹೋಗುತ್ತೀವಿ. ಆಗ ಈ ರೀತಿ ಘಟನೆ ನಡೆದರೆ ನಾವು ಏನ್ ಮಾಡುವುದು ಎಂದು ತಾಯಿ ರೇಣುಕಾ ಅಳಲು ತೋಡಿಕೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ