ಭಾರತದಲ್ಲಿ ಕೊರೊನಾ ಪ್ರಕರಣಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ.ಕಳೆದ 24 ಗಂಟೆಗಳಲ್ಲಿ 49,464 ಜನರನ್ನು ವೈರಸ್ಗಾಗಿ ಪರೀಕ್ಷಿಸಲಾಗಿದೆ ಮತ್ತು 157 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,46,77,459ಕ್ಕೆ ಏರಿಕೆಯಾಗಿದೆ.4,41,43,342 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ಪ್ರಸ್ತುತ ದೇಶದಲ್ಲಿ 3,421 ಸಕ್ರಿಯ ಪ್ರಕರಣಗಳಿವೆ.24 ಗಂಟೆಗಳಲ್ಲಿ ಒಬ್ಬಸಾವಿನೊಂದಿಗೆ, ಒಟ್ಟು ಸಾವಿನ ಸಂಖ್ಯೆ 5,30,696 ಕ್ಕೆ ತಲುಪಿದೆ. ಈವರೆಗೆ 220.06 ಕೋಟಿ ಡೋಸ್ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.