ಸರಿಯಾದ ಸಮಯಕ್ಕೆ ಬಸ್ಸು ಬರದ ಕಾರಣ ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ ಘಟನೆ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ನಡೆದಿದೆ. ಇಂಡಿಯಿAದ ವಿಜಯಪೂರಕ್ಕೆ ಹಾಗೂ ವಿಜಯಪೂದಿಂದ ಇಂಡಿಗೆ ಹೋಗುವ ಎಲ್ಲಾ ಬಸ್ಸುಗಳು ತಡವಲಗಾ ಮಾರ್ಗವಾಗಿ ಚಲಾಯಿಸಬೇಕು ಎಂದು ಆದೇಶ ಇದ್ದರೂ ಕೂಡಾ ಬಸ್ ಚಾಲಕರು ಹಾಗೂ ನಿರ್ವಾಹಕರು ಆದೇಶ ಉಲ್ಲಂಘಿಸಿ ತಡವಲಗಾ ಗ್ರಾಮಕ್ಕೆ ಬರದೆ,ಜೋಡಿಗುಡಿಯ ಮೂಲಕ ಇಂಡಿ ಹಾಗೂ ವಿಜಯಪೂರಕ್ಕೆ ಹೋಗುತ್ತಾರೆ, ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಅನಾನುಕೂಲವಾಗುತ್ತದೆ , ಇದನ್ನು ಸಹಿಸದ ನೂರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಧಿಡೀರನೆ ರಸ್ತೆಗಿಳಿದು ಕೆಲವು ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಇಂಡಿ ಘಟಕ ವ್ಯೆವಸ್ಥಾಪಕ ಎಸ್ ಜಿ ಬಿರಾದಾರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿ ಇನ್ನೂ ಮುಂದೆ ತಡವಲಗಾ ಗ್ರಾಮಕ್ಕೆ ಇಂಡಿ ಹಾಗೂ ವಿಜಯಪೂರ ಘಟಕದ ಎಲ್ಲಾ ಬಸ್ಸುಗಳನ್ನು ತಡವಲಗಾ ಮಾರ್ಗವಾಗಿ ಚಲಾಯಿಸಲು ಇಂದಿನಿಂದ ಒಂದು ಆದೇಶವನ್ನು ಹೊರಡಿಸಲಾಗುವುದು, ಆದೇಶ ಪ್ರತಿಯೊಂದನ್ನೂ ಹೊರಡಿಸಿ ಆ ಪ್ರತಿಯನ್ನು ತಮಗೆ ನೀಡಲಾಗುವುದು, ಇನ್ನೂ ಮುಂದೆ ಬಸ್ಸಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಹಾಗೂ ಇಂದಿನಿAದ ಜೋಡಗುಡಿ ಹತ್ತಿರ ಒಬ್ಬ ಸಾರಿಗೆ ನಿಯಂತ್ರಕನ್ನು ನೇಮಿಸಲಾಗಿದೆ ಎಂದು ಹೇಳಿದರು. ತಡವಲಗಾ ಗ್ರಾಪಂ ಅಧ್ಯಕ್ಷ ಶ್ರೀಮತಿ ಸುನಂದಾ ವಾಲಿಕಾರ ಅವರು ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿ, ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ಸು ನಿಲುಗಡೆಗೆ ಆಗ್ರಹಿಸಿದರು. ಸಾರಿಗೆ ನಿಯಂತ್ರಕರಾದ ಸುರೇಶ ಚನಗೊಂಡ, ಎಲ್ ಆರ್ ರಾಠೋಡ, ಯಲ್ಲಪ್ಪ ಭೀಸೆ ಮತ್ತಿತರಿದ್ದರು.