ಯಶ್ ಮತ್ತು ರಾಧಿಕಾ ಪಂಡಿತ್ಗೆ ಇಂದು 6ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.ರಾಧಿಕಾ ಯಶ್ ಜೊತೆಗೆಯಾಗಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡು, ದಾಂಪತ್ಯದ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ಇದು ನಾವೇ, ಅನೇಕ ಸಿನಿಮಾಗಳಲ್ಲಿ, ಲವಲವಿಕೆ ಜೀವನ, ಧಾರ್ಮಿಕ, ಗಂಭೀರ ಎಲ್ಲವೂ ಈ ಜೀವನದ ಮ್ಯಾಜಿಕಲ್ ವರ್ಷಗಳಾಗಿದೆ.ನಿನ್ನನ್ನು ಪ್ರೀತಿಸುತ್ತೇನೆ ಎಂದು ಯಶ್ಗೆ ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.