ಇಂಡಿ ಪಟ್ಟಣದ ಆರ್.ಎಂ ಶಹಾ ಶಾಲೆಯಲ್ಲಿ ವಾಟರ ಟ್ಯಾಂಕ ಯುಕೆಜಿ ಓದುತ್ತಿದ್ದಂತ ಬಾಲಕ ಶಿವರಾಜ್ ರೋಡಗಿ(5) ಮೇಲೆ ಬಿದ್ದು ಗಾಯಗೊಂಡಿದ್ದಾನೆ.
ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಂತ ಶಾಲೆಯ ಆಡಳಿತ ಮಂಡಳಿಯವರಿಗೆ ಬಾಲಕ ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ.ಈ ಸಂಬಂಧ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೋಷಕರು, ಬಾಲಕ ಶಿವರಾಜ್ ಸಾವಿಗೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.ಅಂದಹಾಗೇ ಮೃತ ಯುಕೆಜಿ ಬಾಲಕ ಶಿವರಾಜ್ ರೋಡಗಿ ಇಂಡಿ ತಾಲೂಕಿನ ಮಾವಿಹಳ್ಳಿಯ ನಿವಾಸಿ ಎಂಬುದಾಗಿ ತಿಳಿದು ಬಂದಿದೆ.