ಆರೋಪಿತನಾದ ಜಗು ತಂ.ಭೂತಾಳಿ ಪೂಜಾರಿ, ಸಾ|| ಅಂಜುಟಗಿ, ತಾ|| ಇಂಡಿ, ವಿಜಯಪುರ ಈತನು ದಿ : 18-10-2010 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಝಳಕಿ ಬಸ್‌ಸ್ಟ್ಯಾಂಡ ಎದುರಿಗೆ ಕಪೌಂಡ ಗೋಡೆಯ ಮೇಲೆ ತನ್ನ ಹತ್ತಿರ ಯಾವುದೇ ಲೈಸನ್ಸ್ -ವ- ಪರವಾಣಿಗೆ ಇಲ್ಲದೇ ಅನಧೀಕೃತವಾಗಿ ಸಿಂಗಲ್ ಬ್ಯಾರಲ್‌ದ ಸಣ್ಣ ಗನ್ ಇಟ್ಟುಕೊಂಡಾಗ ಸಿಕ್ಕಿದ್ದು, ಆರೋಪಿತನ ಮೇಲೆ ಭಾರತೀಯ ಆಯುಧ ಕಾಯ್ದೆ-1959 ರ ಕಲಂ 25 ಅಡಿಯಲ್ಲಿ ಸಿದ್ದೇಶ್ವರ ಪೊಲೀಸ ಇನ್ಸಪೆಕ್ಟರ್, ಡಿ.ಸಿ.ಐ.ಬಿ.ವಿಜಯಪೂರ. ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಸದರಿ ಪ್ರಕರಣವನ್ನು ಎ.ಎ.ತಾಳಿಕೋಟಿ, (ಎ.ಎಸ್.ಐ.), ಮತ್ತು ಗಣಪತಿ ಆರ್.ಎಲ್. (ಪಿ.ಎಸ್.ಐ.), ಝಳಕಿ ಪೊಲೀಸ ಠಾಣೆ, ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ಮಾನ್ಯ ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ, ಇಂಡಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಈಶ್ವರ ಎಸ್.ಎಮ್. ಇವರು ಸದರಿ ಪ್ರಕರಣದ ವಾದ ವಿವಾದಗಳನ್ನು ಆಲಿಸಿ ಆರೋಪಿತನಿಗೆ ಭಾರತೀಯ ಆಯುಧ ಕಾಯ್ದೆ-1959 ರ ಕಲಂ 25(1B)(a) ಪ್ರಕಾರ 1 ವರ್ಷ ಸಾದಾ ಕಾರಾಗೃಹ(ಜೈಲು) ಶಿಕ್ಷೆ ಹಾಗೂ ರೂ.10,000=00 ದಂಡ ಮತ್ತು ದಂಡ ಭರಿಸದಿದ್ದರೆ 4 ತಿಂಗಳ ಹೆಚ್ಚುವರಿಯಾಗಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ, ದಿನಾಂಕ : 05-09-2023 ರಂದು ತೀರ್ಪು ನೀಡಿರುತ್ತಾರೆ.ಸದರಿ ಪ್ರಕರಣದಲ್ಲಿ ಅಭಿಯೋಗ/ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಇಬ್ರಾಹಿಂ ಗಟ್ಟಿಮಹಲ ಇವರು ವಾದ ಮಂಡಿಸಿದ್ದರು. ಸದರಿ ವಿಷಯವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲು ಈ ಮೂಲಕ ಕೋರಿದೆ.