ಇಂಡಿ: ‘ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ, ಸ್ವಚ್ಚ ನೀರಿನಲ್ಲಿ ಲಾರ್ವಾಗಳು 5 1 ಇರುತ್ತವೆ. ಮುಂಜಾಗೃತವಾಗಿ ಮಕ್ಕಳು ಮತ್ತು ವೃದ್ಧರು ಸೊಳ್ಳೆ ಪರದೆ ಹಾಗೂ ಮಕ್ಕಳು ಮೈತುಂಬಾ ಬಟ್ಟೆ ಧರಿಸಬೇಕು’ – ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಇಂಡಿ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಡೆಂಗಿ ನಿಯಂತ್ರಣ ಜನ ಜಾಗೃತಿ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
‘ಈಡೀಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಹಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ಜ್ವರವನ್ನು – ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ – ಹಚ್ಚಬಹುದು. ನಿಮ್ಮ ಮನೆಯಲ್ಲಿ ಈ ಸಂಗ್ರಹಿಸಿದ ನೀರನ್ನು ವಾರಕ್ಕೊಮ್ಮೆ – ಖಾಲಿ ಮಾಡಿ, ಸ್ವಚ್ಛಗೊಳಿಸಿ ಪುನಃ ನೀರು ತುಂಬಿಸಬೇಕು’ ಎಂದರು.
‘ಪ್ರತಿ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಬೇಕು, ವಾರದಲ್ಲಿ 2 ದಿನ ಲಾರ್ವಾ ಸರ್ವೆ ಮಾಡಬೇಕು ಸಾರ್ವಜನಿಕರೂ ಸ್ವಚ್ಛತೆ ಕಾಪಾಡಬೇಕು. ಮನೆಯ ಸುತ್ತ- ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛವಾಗಿಡಬೇಕು’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅಭೀದ ಗದ್ಯಾಳ್ ಡೆಂಗಿ ಬಗ್ಗೆ ಸಾರ್ವಜನಿಕರಿಗೆ ಸ್ವಚ್ಛತೆ ಮಾಡಿದರು. మిని ವಿಧಾನಸೌಧದಿಂದ ಆರಂಭವಾದ ಜಾಥಾ ಬಸವೇಶ್ವರ ಸರ್ಕಲ್, ಕುಂಬಾರ ಓಣಿ, ಶಾಂತೇಶ್ವರ ಓಣಿ, ದರ್ಗಾ ಓಣಿ, ಮಹಾವೀರ ಸರ್ಕಲ್, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ತಲುಪಿತು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಎಚ್.ಕೆ.ಮಳಗೊಂಡ, ಪ್ರಕಾಶ ರಾಠೋಡ, ಉಪನ್ಯಾಸಕ ಮಹಾಂತೇಶ ಪಾಟೀಲ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಪುರಸಭೆಯ ಸಿಬ್ಬಂದಿ, ಪೌರಕಾರ್ಮಿಕರು, ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.