ಇಂಡಿ : ಭಾರತ ಕಂಡ ಮಹಾನ್ ಆಧ್ಯಾತ್ಮಿಕ ನಾಯಕ,ತಮ್ಮ ಶ್ರೇಷ್ಠ ಬದುಕು ಹಾಗೂ ಸಂದೇಶಗಳ ಮೂಲಕ ಯುವಕರಿಗೆ, ಜನಮಾನಸದಲ್ಲಿ ಸ್ಪೂರ್ತಿಯ ಸೆಲೆಯಾದವರು ಸ್ವಾಮಿ ವಿವೇಕಾನಂದರು ಎಂದು ತಹಸೀಲ್ದಾರ ಬಿ.ಎಸ್.ಕಡಕಬಾವಿ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಯುವ ಶಕ್ತಿಯಿಂದ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಯುವ ದಿನವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ರಾಮಸಿಂಗ ಕನ್ನೊಳ್ಳಿ, ಅವಿನಾಶ ಬಗಲಿ,ಜಗದೀಶ ಕ್ಷತ್ರಿ, ಸತೀಶ ಕಂಬಾರ ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವಗಳು, ಬೋಧನೆ ಮತ್ತು ಸಿದ್ದಾಂತಗಳು ಭಾರತದ ಅತ್ಯುನ್ನತ ಸಂಸ್ಕೃತಿ ಮತ್ತು ಸಂಪ್ರದಾಯದ ಆಸ್ತಿಯಾಗಿವೆ. ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಪ್ರಮುಖ ಭಾಗಿಯಾಗಿರುವ ಯುವ ಸಮೂಹವು ವಿವೇಕಾನಂದರ ತತ್ವಗಳು ಮತ್ತು ಬೋಧನೆಯಿಂದ ಪ್ರೇರಣೆಗೊಂಡು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಆಶಯದಿಂದ ಯುವದಿನವನ್ನು ಆಚರಿಸಲಾಗುತ್ತಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ವೇಂಕಟೇಶ ಕುಲಕರ್ಣಿ,ಬಾಳು ಮುಳಜಿ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಹತ್ತಿ,ಅರವಿಂದ ಪಾಟೀಲ,ಚಂದು ದೇವರ, ನಾಗರಾಜ ದಶವಂತ,ಆನAದ ದೇವರ,ಸಂತೋಷ ಪಾಟೀಲ ಮತ್ತಿತರಿದ್ದರು.