ಕೃಷ್ಣಾ ಮುಖ್ಯ ಕಾಲುವೆಯಿಂದ ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಹರಿಸಲಾಗಿದೆ ಎಂದು ಕೃಷ್ಣಾ ಬಾಗ್ಯ ಜಲ ನಿಗಮದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.
ಕಳೆದ ಬಾರಿ ಕೃಷ್ಣಾ ಮುಖ್ಯ ಕಾಲುವೆಯಿಂದ ೧೩೫ ಕಿ.ಮಿ ಮಾತ್ರ ನೀರು ಹರಿಯಬಿಡಲಾಗಿತ್ತು. ಇದರಿಂದ ಆ ಭಾಗದ ಜನರು ಸತ್ಯಾಗ್ರಹ ಮಾಡಿದ್ದರು ಎಂದರು.
ಕೆAಬಾವಿಯ ೦ ಕಿ.ಮಿಯಿಂದ ಸಿಂದಗಿ ತಾಲೂಕಿನ ಬಳಗಾನೂರ ಕೆರೆಯ ವರೆಗೆ ನಂತರ ಬಳಗಾನೂರ ಕೆರೆಯಿಂದ ಇಂಡಿ ತಾಲೂಕಿನಿಂದ ಚಡಚಣ ತಾಲೂಕಿನ ದಸೂರ ವರೆಗೆ ನೀರು ಹರಿಸಿದ್ದು ಆ ನೀರು ನಂತರ ಭೀಮಾ ನದಿ ಸೇರುತ್ತದೆ ಎಂದರು.
ಇದರಿAದ ಸಿಂದಗಿ,ಇAಡಿ ಮತ್ತು ಚಡಚಣ ತಾಲೂಕಿನ ಎಲ್ಲ ಕೆರೆ ತುಂಬಿಸುವದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಅನುಕೂಲ ವಾಗುತ್ತದೆ ಎಂದರು.
ಸಹಾಯಕ ಕಾರ್ಯ ಪಾಲಕ ಅಭಿಯಂತರ ಶ್ರೀಮಂತ ಅಂಗಡಿ, ಜಿ.ಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಆರ್.ಎಸ್.ರುದ್ರವಾಡಿ,ಸಾಜಿದ ನಲವತ್ತವಾಡ, ಮಲ್ಲಿಕಾರ್ಜುನ ತೆಲಂಗಿ, ಸಾದಿಕ ಹೊನ್ನುಟಗಿ ಮತ್ತಿತರಿದ್ದರು.