ಸ ವರ್ಷಾಚರಣೆ ಹಿನ್ನೆಲೆ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಮಾರ್ಗಸೂಚಿಗಳು ಹೀಗಿವೆ..
*ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪ್ರಯಾಣಿಕರ ಸ್ಟೀನಿಂಗ್ ಮಾಡಬೇಕು. ಕೋವಿಡ್ ರೋಗ ಲಕ್ಷಣಗಳು ಕಂಡು ಬಂದರೆ ಬೆಂಗಳೂರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ಮತ್ತು ಮಂಗಳೂರಿನಲ್ಲಿ ವೆಸ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಬೇಕು. ರೋಗ ಲಕ್ಷಣ ಕಂಡು ಬಂದರೆ ಪ್ರಯಾಣಿಕರು ಕ್ವಾರಂಟೈನ್‌ಗಾಗಿ ಹತ್ತಿರದ ಆಸ್ಪತ್ರೆಗೆ ಹೋಗಬಹುದು. ಆಸ್ಪತ್ರೆ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.
*ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಮಾದರಿಗಳನ್ನು ನೀಡುವ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಡಬಹುದು. ಆದರೆ ಹೋಮ್ ಕ್ವಾರಂಟೈನ್‌ನಲ್ಲಿರಬೇಕು.ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಸ್ಥಳೀಯ ಆರೋಗ್ಯ ತಂಡವನ್ನು ಸಂಪರ್ಕಿಸಬೇಕು.
*ಕೋವಿಡ್ ಪಾಸಿಟಿವ್ ವರದಿಯನ್ನು ಹೊಂದಿರುವ, CT ಪ್ರಮಾಣ 25 ಕ್ಕಿಂತ ಕಡಿಮೆ ಇರುವ ಎಲ್ಲಾ ಮಾದರಿಗಳನ್ನು BF7 ರೂಪಾಂತರವಿದೆಯೇ ಎಂದು ಪರೀಕ್ಷಿಸಲು ಜೀನೋಮ್ ಪ್ರಕ್ರಿಯೆಗೆ ಕಳುಹಿಸಬೇಕು.
*12 ವರ್ಷದೊಳಗಿನ ಮಕ್ಕಳು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಆರೋಗ್ಯವಂತ ಪೋಷಕರೊಂದಿಗೆ ಇರಬೇಕು.
*ಹೊಸ ವರ್ಷದ ಆಚರಣೆಗಳನ್ನು ಮಧ್ಯರಾತ್ರಿಯ ಮೊದಲು ಮುಗಿಸಬೇಕು. ಹೆಚ್ಚು ಜನ ಇರಬಾರದು.ಸಾಧ್ಯವಾದರೆ ಹಗಲೊತ್ತಿನಲ್ಲಿ ಆಚರಿಸಿ.
*ಚಿತ್ರ ಮಂದಿರಗಳಲ್ಲಿ ಜನರು ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು.ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು.
*ಬಾರ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳಲ್ಲಿನ ಗ್ರಾಹಕರು ಮತ್ತು ಉದ್ಯೋಗಿಗಳು 2 ಡೋಸ್ ವ್ಯಾಕ್ಸಿನೇಷನ್ ತೆಗೆದುಕೊಳ್ಳಬೇಕಾಗುತ್ತದೆ.