‘ಸೋಲೊಗಾಮಿ’ ಈ ಪದ ಇತ್ತೀಚಿಗೆ ಭಾರಿ ಪ್ರಚಲಿತದಲ್ಲಿದೆ. ಕಳೆದವಾರ ಗುಜರಾತನ ವಡೋದರದ ಕ್ಷಮಾ ಬಿಂದು ಎಂಬಾಕೆ ತನ್ನನ್ನು ತಾನೆ ಮದುವೆಯಾದ ಮೇಲೆ ಸೋಲೊಗಾಮಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಹಾಗಾದರೆ ಸೋಲೊಗಾಮಿ ಎಂದರೇನು? ಎಂಬ ಪ್ರಶ್ನೆಗೆ ಉತ್ತರ, ಸೋಲೊಗಾಮಿ ಎಂದರೆ ಯಾವುದೇ ಪುರುಷ ಅಥವಾ ಸ್ತ್ರೀ ತನ್ನನ್ನು ತಾನೇ ಮದುವೆಯಾಗುವುದಾಗಿದೆ.
ಸೋಲೋಗಾಮಿ ಎಂಬುದು ಸೋಲೊ ಟ್ರಾವೆಲ್ ಇದ್ದಹಾಗೆ ಇದೇನು ಹೊಸದಲ್ಲ.1996ರಲ್ಲಿ ಡೆನ್ನಿಸ್ ರಾಡಮನ್ ತನ್ನನ್ನೇ ತಾನು ಮದುವೆಯಾಗಿದ್ದ. ಈ ಮೊದಲ ವಿದೇಶಗಳಲ್ಲಿ ನಡೆಯುತ್ತಿದ್ದ ಈ ಸೋಲೊಗಾಮಿ ಮದುವೆ ಗುಜರಾತನ ಹುಡುಗಿಯ ಮದುವೆಯ ಮೂಲಕ ಭಾರತಕ್ಕೂ ಕಾಲಿಟ್ಟಿದೆ ಸಂಸ್ಕೃತಿ, ಸಂಪ್ರದಾಯ ,ಮತ್ತು ಧಾರ್ಮಿಕ ಕಟ್ಟುಪಾಡುಗಳ ಭಾರತದಲ್ಲಿ ಈ ರೀತಿಯ ಮದುವೆಗೆ ವಿರೋಧಗಳು ವ್ಯಕ್ತವಾದರೂ, ಮೊಟ್ಟೆ ಮೊದಲ ಸೋಲೊಗಾಮಿ ಮದುವೆ ಯಶಸ್ವಿಯಾಗಿ ನಡೆದಿದೆ.
ಮಹಿಳೆಯರು/ ಹುಡುಗಿಯರು ಯಾಕೆ ಸೋಲೊಗಾಮಿ ಮಾಡಿಕೊಳ್ಳುತ್ತಾರೆ? ಹೊಸ ಟ್ರೇಂಡ ಸೋಲೂಗಾಮಿ ಅಥವಾ ತನ್ನನ್ನು ತಾನೇ ಮದುವೆಯಾಗುತ್ತಿರುವ ಮದುವೆಯಾಗುವತ್ತ ಪುರುಷರಿಗಿಂತ ಮಹಿಳೆಯರೇ ಹೆಚ್ಚು ವಾಲುತ್ತಿದ್ದಾರೆ. ಭಾರತದಲ್ಲಿ ಮೊದಲ ಸೋಲೂಗಾಮಿ ಮಾಡಿಕೊಂಡಿರುವುದು ಕೂಡ ಓರ್ವ ಯುವತಿಯಾಗಿದ್ದಾಳೆ ಮಹಿಳೆಯರು ಸೋಲೊಗಾಮಿ ಆಕರ್ಷಿತರಾಗಲು ಹಲವು ಕಾರಣಗಳಿವೆ ಎಂದು ಅಧ್ಯಯನಗಳು, ವರದಿಗಳು ಹೇಳುತ್ತಿದೆ. ಅವುಗಳಲ್ಲಿ ಕೆಲವು ಹೀಗಿವೆ.
1.ಪುರುಷ ಅಥವಾ ಮಹಿಳೆ ಮದುವೆಯಾಗಿ ಸಂಗಾತಿಯ ಜೊತೆ ಇರುವಾಗ ಅನುಭವಿಸುವುದಕ್ಕಿಂತ ಹೆಚ್ಚಿನ ಸಂತೋಷವನ್ನು ಅವರ ಏಕಾಂಗಿಯಾಗಿದ್ದಾಗ ಅನುಭವಿಸುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ ಆದ್ದರಿಂದ ಸೋಲೊಗಾಮಿಯತ್ತ ಒಲವು ತೋರುತ್ತಿದ್ದಾರೆ.
2.ಮದುವೆಯಾದ ಮೇಲೆ ಇನ್ನೊಬ್ಬರು ಸಂಗಾತಿ ತನ್ನನ್ನು ಕಂಟ್ರೋಲ್ ಮಾಡುತ್ತಾರೆ ಎಂಬ ಆತಂಕದಿಂದ ಸ್ವತಂತ್ರ ಮತ್ತು ಸಂತೋಷದ ಜೀವನಕ್ಕಾಗಿ ಯುವಕ-ಯುವತಿಯರು ಸೋಲೊಗಾಮಿ ಮಾಡಿಕೊಳ್ಳುತ್ತಾರೆ.
3.ಯುವತಿಯರು ಅಥವಾ ಮಹಿಳೆಯರು ತನ್ನನ್ನು ಮದುವೆಯಾಗುವ ಗಂಡಸು ತನ್ನ ಮೇಲೆ ನಿಯಂತ್ರಣ ಹೇರಬಹುದು ತನ್ನ ಸ್ವಾತಂತ್ರ್ಯ ಸಂತಸಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸೋಲೊಗಾಮಿ ಮೊರೆ ಹೋಗುತ್ತಾರೆ.
4.ಅನೇಕ ಯುವತಿಯರು/ ಮಹಿಳೆಯರು ಸರಿಯಾದ ಹುಡಗನ ಹುಡುಕಾಟ ನಡೆಸಿ ಸೋತಾಗ ಮೊರೆ ಹೋಗಬಹುದು ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಭಾರತದಲ್ಲಿ ಇರುವರೆಗೆ ಇರದ ಹೊಸ ಸಂಪ್ರದಾಯವೊಂದು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಮದುವೆ ಅನೇಕ ಯುವಜನರು ಮುಂದಾಗಬಹುದು ಎಂಬುದರಲ್ಲಿ ಸಂಶಯವೇ ಇಲ್ಲ.