ಸಿಎಂ ಬಸವರಾಜ ಬೊಮ್ಮಾಯಿ ಅವರೇ, ‘ಅಡಿಕೆ ನಾವೀನ್ಯ ನಿಧಿ’ ಸ್ಥಾಪಿಸುತ್ತೇವೆ ಎಂಬ ಬಿಜೆಪಿ ಪಕ್ಷದ ಸರಕಾರದ ಭರವಸೆ ಹುಸಿಯಾಗಿದೆ.
40% ಸರ್ಕಾರವನ್ನು ನಂಬಿದ್ದ ಬೆಳೆಗಾರರು ಸಮರ್ಪಕವಾಗಿ ಬೆಳೆ ಸಂಸ್ಕರಣೆ ಮಾಡಲಾಗದೆ ಕಂಗಾಲಾಗಿದ್ದಾರೆ. ‘ಅಡಿಕೆ ನಾವೀನ್ಯ ನಿಧಿ’ ಯಾವಾಗ ಸ್ಥಾಪಿಸುತ್ತೀರಿ? ಅಡಿಕೆ ಬೆಳೆಗಾರರು ಕೇಳುತ್ತಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.