ಕರ್ನಾಟಕ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇತ್ತೀಚೆಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪಿ.ಬಿ ಕತ್ತಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಕ್ಕಳಿಗೆ ಅಭ್ಯಾಸದ ಜೊತೆ ಜೊತೆಗೆ ಧ್ಯಾನ ಮತ್ತು ಯೋಗದ ಪರಿಕಲ್ಪನೆಯನ್ನು ಕೊಡಬೇಕು ಯೋಗ ಮನುಷ್ಯನ ಜೀವನದ ಅಂಗವಾಗಬೇಕು. ಮಕ್ಕಳು ಧ್ಯಾನ ಯೋಗ ಮಾಡಿದಾಗ ಜೀವನದಲ್ಲಿ ಸದೃಢ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ
ಶ್ರೀ ಎ ಎಸ್ ಬೋರಾಮಣಿ ಮಾತನಾಡಿ , “ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು” ಎನ್ನುವಂತೆ “ಆರೋಗ್ಯವೇ ಭಾಗ್ಯ “ಎನ್ನುವ ರೀತಿಯಲ್ಲಿ ಮಕ್ಕಳಿಗೆ ಒಳ್ಳೆಯ ಧ್ಯಾನ ಮತ್ತು ಯೋಗದಿಂದ ಮನಸ್ಸುದ್ದಿಯನ್ನ ಮಾಡಬಹುದು , ಒಳ್ಳೆಯ ಸಮತೋಲನ ಆಹಾರ ಸೇವಿಸಿ ದಿನನಿತ್ಯ ಯೋಗ ಧ್ಯಾನ ಮಾಡುವುದರಿಂದ ಮನುಷ್ಯನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುಧಾ ಸುಣಗಾರ,
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಭೀಮರಾಯ ಹುನ್ನೂರ್,
ಪ್ರೊಫೆಸರ್ ಬಿಕೆ ಉಕಮನಾಳ, ಶಿಕ್ಷಕ- ಶಿಕ್ಷಕೀಯರಾದ ವಿನಾಯಕ ಹಳಕಟ್ಟಿ, ಸುರೇಖಾ
ಭೈರ ಶೆಟ್ಟಿ, ಶ್ರುತಿ ಬಿರಾದಾರ್ ,ಕೆ ಎನ್ ಕೋಟ್ನಾಳ್ ,ರೇಣುಕಾ ಜಿ , ಪ್ರಿಯಾ, ಸೀಮಾ ಎಚ್ , ಸೀಮಾ ಬಿ , ಪೂಜಾ ಉಷಾ , ಜಯಶ್ರೀ, ಶ್ವೇತಾ , ದೈಹಿಕ ಶಿಕ್ಷಕರಾದ ಸಚಿನ್ ವಾಲಿಕಾರ್,
ರಾಕೇಶ್ ದೇಸಾಯಿ ಇತರರು ಭಾಗವಹಿಸಿದ್ದರು.