ವಿಜಯಪುರ ಜಿಲ್ಲಾಮಟ್ಟದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಇವರಿಗೆ ಸಹೋದರ ವಿಶ್ವಾಸದಿಂದ ಯುವತಿಯರು ರಾಕಿಕಟ್ಟಿದರು. ಅವರ ಅಭಿಮಾನ ನನಗೆ ಸಂತಸ ತಂದಿದೆ ಎಂದು ಸಚಿವರು ತಿಳಿಸಿದರು ನಮ್ಮೆಲ್ಲ ಜನತೆಗೆ ಮತ್ತೊಮ್ಮೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು ಎಂದು ಶುಭಕೋರಿದರು.