ಕೌಟುಂಬಿಕ ಕಲಹ ಹಿನ್ನಲೆ ಆಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾನದಿಗೆ ಹಾರಿ ಯುವಕ ಆತ್ಮಹತ್ಯೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಡೆದಿದೆ.
ಸುನೀಲ ಚವ್ವಾಣ (25) ನದಿಗೆ ಹಾರಿ ಆತ್ಮಹತ್ನೆಮಾಡಿಕೊಂಡ ದುರ್ವೈವಿ ನಿಡಗುಂದಿ ತಾಲೂಕಿನ ಸೀತಿಮನಿ ತಾಂಡಾ ನಿವಾಸಿ ಸುನೀಲ ಇನ್ನು ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸ ವ್ಯಕ್ತಪಡಿಸಿದ್ದಾರೆ. ಇನ್ನೂ ನದಿಗೆ ಹಾರಿದ್ದ ವ್ಯಕ್ತಿಯ ಶವ ಸ್ಥಳೀಯರು ಹೊರಕ್ಕೆ ತೆಗೆದಿದ್ದಾರೆ ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.