ಝಳಕಿ…: ರಾಷ್ಟ್ರೀಯ ಹೆದ್ದಾರಿ ಹಲಸಂಗಿ ಕ್ರಾಸದಿಂದ ಹಲಸಂಗಿ ಗ್ರಾಮದ ವರೆಗೆ ದ್ವಿಚಕ್ರ ವಾಹನಗಳ ಭವ್ಯಮೆರವಣಿಗೆಯೊಂದಿಗೆ ಗ್ರಾಮಕ್ಕೆ ಸ್ಥಾಗತಿಸಿಕೊಂಡು, ಹಲಸಂಗಿ ಗ್ರಾಮದಲ್ಲಿ 100 ಲಕ್ಷಗಳ ಅನುದಾನದಲ್ಲಿ ರಸ್ತೆ ಕಾಮಗಾರಿ ಮತ್ತು 18 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಗ್ರಂಥಾಲಯದ ಭೂಮಿ ಪೂಜೆ ನಾಗಠಾಣ ಶಾಸಕರ ಪತ್ನಿ ಡಾ. ಸುನಿತಾ ಚವ್ಹಾಣ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕ್ಷೇತ್ರದ ಜನರ ಕ್ಷೇಮಾಭಿವೃದ್ಧಿಯ ನಮ್ಮ ಕರ್ತವ್ಯ ಸಾಮಾನ್ಯ ಜನರು ಓಡಾಡಲು ರಸ್ತೆಗಳು ಸುಸಜ್ಜಿತವಾಗಿರಬೆಕು, ಗ್ರಾಮದಲ್ಲಿ ಸ್ವಚ್ಛ ವಾತವಾತವರಣ ಸೃಷ್ಟಿಯಾಗಬೇಕು, ಶಾಂತತೆ ವಾತಾವರಣ, ಜನತಾ ಜನಾರ್ದನ ಎಂಬ ವಾಡಿಕೆಯಂತೆ, ಜನರ ಸಮಸ್ಯೆಗಳು ನಿವಾರಣೆ ಮಾಡುವದೆ ನಮ್ಮ ಆದ್ಯ ಕರ್ತವ್ಯ , ಸಾರ್ವಜನಿಕರು ಯಾವುದೆ ಭಯವಿಲ್ಲದೆ, ಯಾವುದೆ ಮಧ್ಯವರ್ತಿಗಳಿಲ್ಲದ ನೆರವಾಗಿ ಶಾಸಕರಿಗೆ ಸಂಪರ್ಕಿಸಬಹುದು, ತಮ್ಮ ಅಹವಾಲುಗಳನ್ನು ತಿಳಿಸಿ, ಸಮಸ್ಯೆಗಳನ್ನು ಬಗೆದರಿಸಿಕೊಳ್ಳಬಹುದು. ಜನರಿಂದರೆ ನಾವು, ನಿನ್ನ ಉದ್ಧಾರವೆ ನಮ್ಮ ಕರ್ತವ್ಯ ಎಂದರು.
ಕೇವಲ ಕಾಮಗಾರಿ ಚಾಲನೆ ನೀಡಿ ಕಟ್ಟಡ ಕಟ್ಟಿಸುವದು ಮುಖ್ಯವಲ್ಲ, ಅವುಗಳ ಬಳಕೆ ಮಾಡಿಕೊಳ್ಳುವುದು ಬಹುಮುಖ್ಯ ಗ್ರಾಮದ ಹಿರಿಯರು, ತಿಳುವಳಿಕೆ ಉಳ್ಳವರು, ಸಾಮಾನ್ಯ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿ, ಅವುಗಳ ಉಪಯೋಗ ತಿಳಿಸಬೇಕು, ಗ್ರಂಥಾಲಯ ಉದ್ಘಾಟಿಸಿ ಅಲ್ಲಿನ ವಿಚಾರ, ಆಚಾರಗಳನ್ನು ತಿಳಿಸಿಕೊಡುವುದು ಬಹುಮುಖ್ಯ.
ಈ ಸಂದರ್ಬದಲ್ಲಿ ಬಸವರಾಜಯ್ಯ ಪೂಜಾರಿ, ಚನಬಸಯ್ಯ ಹಿರೇಮಠ, ಈರಯ್ಯ ಅಣಚಿಮತ, ಸಂಗನಬಸಯಯ ಹಿರೇಮಠ, ಅರವಿಂದ ಮತ, ವಿಶ್ವನಾಥ ಪೂಜಾರಿ, ಗ್ರಾಪಂ ಅಧ್ಯಕ್ಷ ಸುವರ್ಣಾ ತಳಕೇರಿ, ಒಮ್ಮಪ್ಪ ಕುಲಕರ್ಣಿ, ದಿಲದಾರ ಪಟೇಲ, ಪಂಚಾಯತ ರಾಜ್ಯ ಇಲಾಖೆಯ ಸಹಾಯಕ ಕಾರ್ಯಪಾಲ ಇಂಜನಿಯ ಸಿ.ಬಿ.ಮಿಂಚನಾಳ, ಮಲಕಾರ್ಜುನ ವಾಲಿಕಾರ, ರಾಜೇಶ ಹೂಗಾರ,ದುಳೆತ ಚವಾಣ ಹಾಗೂ ಗರಾಮಸ್ಥರು ಉಪಸ್ಥಿತರಿದ್ದರು.